ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ಅದನ್ನು




 










 

 








ಕರ್ನಾಟಕದ ಪ್ರಸ್ತುತ ಇಂಧನ ಸಚಿವರಾದಂತಹ ಕೆ ಜೆ ಜಾರ್ಜ್ ಅವರು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಹಸ್ತಕ್ಷೇಪವಿರುವುದರಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಯನ್ನು ಮಾಡುವಾಗ ಸಿಎಂ ಪುತ್ರ ಅವರ ಹತ್ತಕ್ಷೇಪವಾಗಿ ಬೇಸತ್ತು ಹೊರ ನಡೆದಿದ್ದಾರೆ. 

ಜಾರ್ಜ್ ಅವರು ಕೇರಳದ ಕೊಟ್ಟಾಯಂ ಎಂಬ ಪ್ರದೇಶದವರಾಗಿದ್ದು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ. ಅಖಿಲ ಭಾರತ ಯೂಥ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಭಾಗವಹಿಸಿದ್ದಾರೆ. ಮೊದಲ ಬಾರಿಗೆ 1985ರಲ್ಲಿ ಶಾಸಕರಾಗಿ ಆಯ್ಕೆಗೊಂಡರು ಪ್ರಸ್ತುತ ಅವರು ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರ.

ವೀರೇಂದ್ರ ಪಾಟೀಲ್ ಮತ್ತು ಮಧು ಬಂಗಾರಪ್ಪನವರ ಸರ್ಕಾರದಲ್ಲಿಯೂ ಕೂಡ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಸರ್ಕಾರದಲ್ಲಿಯೂ ಕೂಡ ಇಲಾಖೆಯ ಪ್ರಮುಖ ಸ್ಥಾನವನ್ನು ಪಡೆದಿದ್ದರು ಇವರು ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ.

ನಂತರದಲ್ಲಿ ಸಿಎಂ ಅವರ ಆಪ್ತ ಕಾನೂನು ಸಲಹೆಗಾರರಾದಂತಹ ಪೊನ್ನಣ್ಣ ಅವರಿಂದ ಜಾರ್ಜ್ ಅವರ ಮನವರಿಸಲಾಗಿದೆ. ಮನವಳಿಕೆ ಕಾರ್ಯಕ್ರಮ ಸಫಲವಾದಂತೆ ತೋರುತ್ತಿದೆ. 

ಇನ್ನು ಕೆಲವು ಬಲ್ಲ ಮಾಹಿತಿಗಳ ಪ್ರಕಾರ ಜಾರ್ಜ್ ಅವರು ರಾಜೀನಾಮೆ ನೀಡಿರುವುದು ಸುಳ್ಳು ಎಂದು ಸಾಬೀತಾಗಿದೆ. ಜಾರ್ಜ್ ಅವರ ಕೆಲ ಹೊಸ ಹಾಗೂ ಹಳೆಯ ಸ್ನೇಹಿತರು ಕೂಡಿ ಸುಳ್ಳು ವದಂತಿಯನ್ನು ಹಬ್ಬಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿ ಪರಮೇಶ್ವರ್ ಅವರು ಈ ಸುದ್ದಿಯು ಸುಳ್ಳು ಎಂದು ಹೇಳಿದ್ದಾರೆ. 

ಸ್ವತಹ ಇಂಧನ ಸಚಿವರಾದಂತಹ ಕೆ ಜೈ ಜಾರ್ಜ್ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ನಾನು ರಾಜೀನಾಮೆ ಕೊಡುತ್ತೇನೆ ಎಂಬುದು ಊಹಾಪೋಹ ಇದನ್ನು ಯಾರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ನಾನು ರಾಜೀನಾಮೆ ಕೊಟ್ಟಿಲ್ಲ ಆದರೆ ಕೈವಾಡದಿಂದ ಬೇಸರಗೊಂಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. 

ಇಂಧನ ಇಲಾಖೆಯಲ್ಲಿ ಏನೇನು ಮಾರ್ಪಾಡುಗಳಾಗಬೇಕಾದರೂ ಅದಕ್ಕೆ ಇಂಧನ ಸಚಿವರ ಅನುಮತಿ ನೀಡುವುದು ಕಡ್ಡಾಯ ಆದರೆ ಈ ಇಂಧನ ಇಲಾಖೆಯಲ್ಲಿ ಹೇಗಾಗಿದೆ ಎಂದರೆ ಕೆಜೆ ಜಾರ್ಜ್ ಅವರಿಗೆ ಗೊತ್ತಿಲ್ಲದೆ ಕೆಲವು ಸಚಿವರನ್ನು ವರ್ಗಾವಣೆ ಮಾಡಲಾಗಿದೆ ಸಚಿವನಾಗಿ ನನ್ನ ಮಾತನ್ನು ನೀವು ಕೇಳದಿದ್ದಲ್ಲಿ ನಾನೇಕೆ ಇಲ್ಲೇ ಇರಬೇಕು ಎಂದು ಬೇಸರಗೊಂಡಿದ್ದಾರೆ. ಇಂಧನ ಸಚಿವರಿಗೆ ಗೊತ್ತಿಲ್ಲದಂತೆಯೇ ಇಂಧನ ಇಲಾಖೆಯಲ್ಲಿ ಹತ್ತಕ್ಷೇಪ ಮಾಡುವುದು ತಪ್ಪು. 

ಮುಖ್ಯವಾಗಿ ಅಶಿಸ್ತಿನ ಕಾರಣವನ್ನು ಮುಂದಿಟ್ಟುಕೊಂಡು ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದಂತಹ ಪಂಕಜ್ ಕುಮಾರ್ ಪಾಂಡೆ ಅವರಿಗೆ ಮುಖ್ಯ ಕಾರ್ಯದರ್ಶಿಗಳು ನೋಟಿಸು ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. 


ಇದರ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಪೊನ್ನಣ್ಣ ಅವರು ರಾಜೀನಾಮೆ ಬಗ್ಗೆ ಏನು ಮಾಹಿತಿಯೇ ಲಭ್ಯವಿಲ್ಲ ಅಂದಮೇಲೆ ಸಂಧಾನ ಪ್ರಶ್ನೆ ಹೇಗೆ ಬರುತ್ತದೆ ಎಂದು ಹೇಳಿದ್ದಾರೆ. ಪಿಎಂ ಅವರ ಜೊತೆ ಜಾರ್ಜ್ ಅವರ ಸಂಬಂಧ ಪ್ರತಿಕೂಲವಾಗಿದೆ ಇದನ್ನು ಕೆಡಿಸಲೆಂದೇ ಪ್ರತಿಪಕ್ಷದವರು ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ ಕುಮಾರ ಪಾಂಡೆ ಅವರಿಗೆ ಕೆಲವು ಸಭೆಗಳಿಗೆ ಹಾಜರಾಗಿರದ ಕಾರಣ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಅದಕ್ಕೆ ಅವರು ಕೂಡ ಉತ್ತರ ನೀಡಿದ್ದಾರೆ ಇದು ಇಲ್ಲಿಗೆ ಮುಗಿದ ಕಥೆಯಾಗಿದೆ ಇದರಲ್ಲಿ ಜಾರ್ಜ್ ಅವರ ರಾಜೀನಾಮೆಗೆ ಸಂಬಂಧಿಸಿದಂತಹ ಯಾವುದೇ ಮಾಹಿತಿ ಬಂದಲ್ಲಿ ಅದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ ಸ್ವತಃ ಜಾರ್ಜ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

Terms and conditions