ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ
ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ
ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆಯ ಅಧ್ಯಕ್ಷರಾದಂತಹ ಸಿಜೆ ರಾಯ್ ಅವರು ಇಂದು ಜನವರಿ 30 2026 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿ ಜಿ ರಾವ್ ಅವರು ಮೂಲತಃ ಕೇರಳದವರಾಗಿದ್ದಾರೆ. ಮೂಲತಃ ಕೇರಳದವರಾದರೂ ಕೂಡ ಹುಟ್ಟಿ ಬೆಳೆದದ್ದು ಕರ್ನಾಟಕದ ಬೆಂಗಳೂರಿನಲ್ಲಿ ಹೀಗಾಗಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದರು.
ಸಾಮಾನ್ಯ ವ್ಯಕ್ತಿಯಾದಂತಹ ಸಿಜೆ ರಾಯ್ ಅವರು ಒಂದು ಸಾಮ್ರಾಜ್ಯವನ್ನು ಕಟ್ಟಿದ್ದು ರೋಚಕ ಸಂಗತಿಯೇ ಸರಿ. ತಾವಾಯ್ತು ತಮ್ಮ ಕೆಲಸವಾಯಿತು ಮನೆ ಹಾಗೂ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಿದ್ದರು. ಮೊದಮೊದಲು ಅಂದರೆ 1997ರಲ್ಲಿ HAL ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ತದನಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿದರು. ಪ್ರಸ್ತುತ ಅವರ ಬಳಿ ಒಂದು ಸಾವಿರ ಎಕರೆ ಭೂಮಿ ಇದ್ದ ದಾಖಲೆ ಇದೆ.
ಈ ಘಟನೆ ನಡೆದಿದ್ದು ಬೆಂಗಳೂರಿನ ಅವರ ಕಚೇರಿಯಲ್ಲಿ ಎಂದು ಹೇಳಲಾಗಿದೆ. ಇವರ ಪತ್ನಿಯ ಹೆಸರು ಲೀನಾ ರಾಯ. ಇವರಿಗೆ ಇಬ್ಬರೂ ಮಕ್ಕಳಿದ್ದು ಅವರ ಹೆಸರು ರೋಹಿತ್ ಮತ್ತು ರಿಯಾ. ಕಷ್ಟ ಅಂತ ಯಾರಾದರೂ ಬಂದರೆ ಅವರಿಗೆ ಬರಿ ಕೈಯಲ್ಲಿ ಹಿಂದುರಿಸುತ್ತಿರಲಿಲ್ಲ. ಇವರು ದಕ್ಷಿಣ ಭಾರತದ ನಂಬರ್ ಒನ್ ಉದ್ಯಮದಾರರಾಗಿದ್ದರು.
ಐಟಿ ಅಧಿಕಾರಿಗಳು ಅವರ ಕಂಪನಿಯ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಬೆಂಗಳೂರಿನಲ್ಲಿ ರಿಚ್ಮಂಡ್ ಸರ್ಕಲ್ ನಲ್ಲಿ ಅವರ ಕಚೇರಿಯಲ್ಲಿ ನಡೆದಿದೆ. ಇತ್ತ ಕಡೆ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು ಅದೇ ಸಮಯದಲ್ಲಿ ರಾಯ್ ಅವರು ತಮ್ಮ ಚೇಂಬರ್ ನಲ್ಲಿ ಪಿಸ್ತೂರಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತದನಂತರದಲ್ಲಿ ಅವರನ್ನು HSR ಲೇಔಟ್ ನಲ್ಲಿರುವ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಮಾರ್ಗ ಮಧ್ಯದಲ್ಲಿ ಅವರು ಸಾವನ್ನಪ್ಪಿದ್ದರು. ಇವರ ಆತ್ಮಹತ್ಯೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಬಿರುಸಿನ ತನಿಖೆ ಪ್ರಾರಂಭಿಸಿದ್ದಾರೆ
ಈ ಘಟನೆ ನಡೆದ ಸ್ಥಳದಲ್ಲಿ ಅಶೋಕ್ ನಗರ್ ಪೊಲೀಸರು ಬಂದಿದ್ದರು. ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದಪಾಸಣೆ ನಡೆಸುತ್ತಿದ್ದರು. ಬಹುಶಹ ಎಫ್ ಎಸ್ ಎಲ್ ಟೀಮ್ ನ ಅಧಿಕಾರಿಗಳು ಬೆಂಗಳೂರಿನಲ್ಲಿ ಇವರ ಕಚೇರಿಯಲ್ಲಿ ತಪಾಸಣೆ ನಡೆಸಿದ್ದಾರೆ.
ಮಾಧ್ಯಮದವರು ಮಾತ್ರವಲ್ಲದೇ ಬಹಳ ಜನ ಸೇರಿದ್ದರು ಇಂತಹ ಘಟನೆ ನಡೆಯುವುದು ಇದೇನೋ ಹೊಸತಲ್ಲ ಆದರೂ ಕೂಡ ಇಂತಹ ಉದ್ಯಮ ಜಗತ್ತಿನ ದಿಗ್ಗಜ ಆತ್ಮಹತ್ಯೆ ಮಾಡಿಕೊಂಡು ಏನೋ ಇದೆ ಎಂದು ಊಹಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಕಾಫಿ ಎಸ್ಟೇಟ್ ಮಲೀಕರಾದಂತಹ ಸಿದ್ದಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಇದೇ ರೀತಿಯಾಗಿತ್ತು.
ನೂರಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಂತಹ ಮಾಲೀಕರೇ ಆತ್ಮಹತ್ಯೆ ಮಾಡಿಕೊಂಡಾಗ ಇನ್ನು ಆ ಕಂಪನಿಯ ಪರಿಸ್ಥಿತಿ ಏನಾಗಬಹುದು ಅಷ್ಟೇ ಅಲ್ಲದೆ ಅಲ್ಲಿ ಕೆಲಸ ಮಾಡುವಂತಹ ಕೆಲಸಗಾರರ ಪರಿಸ್ಥಿತಿಯೂ ಕೂಡ ಬೀದಿಗೆ ಬಂದಂತಾಗುತ್ತದೆ.
ರಾಯ್ ಅವರು ತಮ್ಮ ಡೈರಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಹೆಸರುಗಳು ಕಂಡುಬಂದಿವೆ. ಅಷ್ಟೇ ಅಲ್ಲದೆ ಒಬ್ಬ ಸಂಸದರ ಹೆಸರನ್ನು ಕೂಡ ಬರೆದಿದ್ದಾರೆ ಅಷ್ಟೇ ಅಲ್ಲದೆ ಅನೇಕ ನಟಿಯರು ಹಾಗೂ ಮಾಡೆಲ್ ಗಳ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಎಲ್ಲವನ್ನು ಕೂಡ ಡೈರಿಯಲ್ಲಿ ಬೆಳೆದಿಡುವ ಹವ್ಯಾಸವನ್ನು ಹೊಂದಿದ್ದರು.
%20(14).jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ