ಬೀದರ್ ನಲ್ಲಿ ಭಾಗ್ಯವಂತಿ ಪವಾಡ

 

ಬೀದರ್ ನಲ್ಲಿ ಭಾಗ್ಯವಂತಿ ದೇವಿಯ ಪವಾಡ 

 ಅದೃಷ್ಟವಂತರಾಗಬೇಕೆಂದು ಪ್ರತಿಯೊಬ್ಬರೂ ಬಯಸುವುದು ಸಹಜವಾಗಿಯೇ ಇರುತ್ತದೆ ಆದರೆ ಅದು ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟದಂತಾಗಿ ಹೋಗಿಬಿಡುತ್ತದೆ ಯಾವುದೋ ಒಂದು ರೀತಿಯಲ್ಲಿ ನಮಗೆ ಅದೃಷ್ಟ ಒಲಿದು ಬರಲು ಅದು ತೊಂದರೆಯನ್ನು ಉಂಟುಮಾಡುತ್ತದೆ ಹೀಗಿರುವಾಗ ದುರಾದೃಷ್ಟವನ್ನೇ ನಾವು ದೂರವಾಗಿಸಿಕೊಂಡು ಅದೃಷ್ಟವನ್ನು ಸಮೀಪವಾಗಿರಿಸಿಕೊಳ್ಳುವಲ್ಲಿ ಕರ್ನಾಟಕದಲ್ಲಿಯೇ ಇರುವ ಈ ದೇವಾಲಯವು ನಮ್ಮ ಭವ್ಯ ದೇವಾಲಯವಾಗಿದೆ.
 
 ಅದೃಷ್ಟದ ದೇವಿ ಇವಳು

 ಕರ್ನಾಟಕದಲ್ಲಿ ಒಬ್ಬಳು ಅದೃಷ್ಟದೇವಿ ಇದ್ದಾಳೆ ಆ ದೇವಿಯ ವಾಸಸ್ಥಾನವು ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ್ ತಾಲೂಕಿನ ಘತ್ತರಗಿ ಗ್ರಾಮದಲ್ಲಿದೆ ಈ ದೇವಿಯು ನಮ್ಮಲ್ಲಿ ಇರುವಂತಹ ದಾರಿದ್ರವನ್ನು ದೂರ ಮಾಡಿ ಅದೃಷ್ಟವನ್ನು ನಮಗೆ ಕರುಣಿಸುತ್ತಾಳೆ ಈಕೆಗೆ ಒಂದು ರೋಚಕವಾದ ಸ್ಥಳ ಪುರಾಣವೂ ಕೂಡ ಇದೆ ಹಾಗಾದರೆ ಬನ್ನಿ ನೋಡೋಣ ಈ ದೇವಿ ಯಾರು ಆಕೆಯಲ್ಲಿದ್ದಾಳೆ ಎಂಬುದನ್ನು ವಿವರವಾಗಿ ತಿಳಿಯೋಣ.

 ಯಾರಿಗೆ ಆಗಲಿ ಅದೃಷ್ಟ ನಮ್ಮ ಕೈ ಸೇರಬೇಕಾದರೆ ಅವರಿಗೆ ದೇವರ ಆಶೀರ್ವಾದ ಬೇಕೆ ಬೇಕು ಆ ದೇವರ ಆಶೀರ್ವಾದ ಇದ್ದವರಿಗೆ ಮಾತ್ರ ಸಿರಿವಂತರಾಗುವ ಅವಕಾಶವಿದೆ ಹಾಗಾದರೆ ನಾವು ಕೂಡ ಅದೃಷ್ಟವಂತರಾಗಬೇಕಾದರೆ ಏನೆಲ್ಲ ಮಾಡಬೇಕು ಎಂಬುದನ್ನು ಈ ದೇವಿಯ ದರ್ಶನದಿಂದ.







 ವಿಜಯನಗರ ಸಾಮ್ರಾಜ್ಯದ ಕುಲದೇವಿಯ ಪರಿಚಯ 

 ಭಾಗ್ಯವಂತಿ ದೇವಿಯು ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿರುವಂತಹ ಪೂಜ್ಯನೀಯ ದೇವಿಯಾಗಿದ್ದಳು ಅವಳನ್ನು ಕೃಷ್ಣದೇವರಾಯ ಹಾಗೂ ಅಲ್ಲಿ ಅವನಿಂದ ಮುಂದೆ ಬಂದ ಎಲ್ಲ ರಾಜರುಗಳು ಕೂಡ ಪೂಜೆ ಮಾಡತೊಡಗಿದರು ಇದರಿಂದ ಅವಳು ಕೃಷ್ಣದೇವರಾಯನ ಅಂದರೆ ವಿಜಯನಗರ ಸಾಮ್ರಾಜ್ಯದ ಕುಲದೇವಿ ಯಾದಳು ಹೀಗೆ ಈ ತಾಯಿಯನ್ನು ಅವರೆಲ್ಲರೂ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದರು ಆ ರಾಜ ಮನೆತನದ ಕೊನೆಯ ರಾಜನಾದಂತಹ ರಾಮರಾಯನು ಅವಳ ಪೂಜೆಯನ್ನು ನಿರ್ಲಕ್ಷಿಸಿದನು. ಆದಕಾರಣ ದೇವಿಯು ತುಂಗಭದ್ರಾ ನದಿಯಲ್ಲಿ ಬಿದ್ದು ತುಂಗಭದ್ರಾ ಹಾಗೂ ಕೃಷ್ಣಾ ನದಿಯಲ್ಲಿ ಇರಿಸಿಕೊಂಡು ಬೀಮಾ ನದಿ ಸಂಗಮಕ್ಕೆ ದೇವಿಯು ಬಂದು ಸೇರುತ್ತಾರೆ ಆಗ ರಾಮರಾಯನ ರಾಜ್ಯ ಪತನವಾಗಿ ಮುಸ್ಲಿಂ ರಾಜ್ಯದ ಕೈವಶವಾಯಿತು ಕೆಲವು ದಿನಗಳ ನಂತರ ನೀರಿನಲ್ಲಿ ಇದ್ದ ದೇವಿಯು ಒಬ್ಬ ಭಕ್ತನು ಭೀಮಾನದಿ ಸಂಗಮದಲ್ಲಿ ಗುರುತಿಸಿದನು . ದೇವಿಯು ಅವನಿಗೆ ಕಾಣಿಸಿಕೊಂಡು ಆ ನದಿಯಲ್ಲಿ ಇದ್ದೇನೆ ಎಂದು ಹೇಳಿ ದೇವಾಲಯ ನಿರ್ಮಾಣ ಮಾಡಿಸಿಕೊಂಡು ಹೀಗೆ ಆ ದೇವಿಯ ಪವಾಡವು ಇಂದು ಕೂಡ ಎಲ್ಲೆಡೆಯೂ ನಡೆಯುತ್ತಿದೆ ಹೀಗೆ ಇದು ಕೂಡ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಟಾಳ ಗ್ರಾಮದಲ್ಲಿಯೂ ಕೂಡ ಪವಾಡ ನಡೆದಿದೆ.

 ಬೀದರ್ ಜಿಲ್ಲೆಯಲ್ಲಿ ಪವಾಡ 
 ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಟಾಳ ಗ್ರಾಮದಲ್ಲಿ ಘತ್ತರಗಿ ಭಾಗ್ಯವಂತಿ ದೇವಿಯ ವಿಗ್ರಹ ಪತ್ತೆಯಾಗಿದೆ 30 ವರ್ಷಕ್ಕೂ ಹಳೆಯದಾದಂತಹ ಅರಳಿ ಮರದಲ್ಲಿ ದೇವಿಯ ವಿಗ್ರಹ ಪತ್ತೆಯಾಗಿದೆ ಅರಳಿ ಮರದ ಸುತ್ತಮುಂದಿರ ನಿರ್ಮಿಸಲು ಮುಂದಾದ ಗ್ರಾಮಸ್ಥರು ದೇವಸ್ಥಾನ ನಿರ್ಮಾಣ ಮಾಡಲು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಲಾಗಿತ್ತು ಅರಳಿ ಮರದಲ್ಲಿ ತಾಯಿಭಾಗ್ಯವಂತಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ ವರ್ಷದ ಕೊನೆಯ ದಿನವಾದ ಡಿಸೆಂಬರ್ 31 ರಂದು ಆ ಮಂದಿರದಲ್ಲಿ ಪವಾಡ ನಡೆದಿತ್ತು ಓಡೋಡಿ ಬಂದು ಜನಸಾಗರವೇ ದೇವಿಗೆ ಕೈ ಮುಗಿಯುತ್ತಿದೆ.

ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions