ಕೋರಿಯನ್ ಬ್ಯೂಟಿ ಟಿಪ್ಸ್
ಕೋರಿಯನ್ ಬ್ಯೂಟಿ ಟಿಪ್ಸ್
ಸುಂದರವಾದ ತ್ವಚೆ ತನ್ನದಾಗಬೇಕೆಂಬುವುದು ಪ್ರತಿಯೊಬ್ಬ ಮಹಿಳೆಯ ಆಸೆ. ಕಾಂತಿಯುತ ಹಾಗೂ ಸುಂದರವಾಗಿ ನಯವಾಗಿ ಹೊಳೆಯಬೇಕೆಂದು ಬಯಸುತ್ತಾಳೆ. ಹೀಗೆ ಬೈಸುವಾಗ ಮಹಿಳೆಯು ಸಾಕಷ್ಟು ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸುತ್ತಾಳೆ ಸುಂದರವಾದ ತ್ವಚೆ ನಿಮ್ಮದಾಗಬೇಕಾದಲ್ಲಿ ಕೋರಿಯನ್ ಮಹಿಳೆಯರ ಟಿಪ್ಸ್ ಅನ್ನು ಫಾಲೋ ಮಾಡಿ.
ಟೋನರ್:
ಇದು ತ್ವಚೆಯ ತೇವಾಂಶವನ್ನು ಕಡಿಮೆ ಮಾಡದಂತೆ ಕಾಪಾಡಿಕೊಳ್ಳುತ್ತದೆ ಹಾಗೂ ತ್ವಚೆಯನ್ನು ಮೃದುವಾಗಿರುತ್ತದೆ. ದುಬಾರಿ ಡೋನರ್ ಗಳನ್ನು ಬಳಸುವುದು ಅವಶ್ಯಕತೆ ಇಲ್ಲ. ಸ್ವಾಭಾವಿಕವಾದ ಹಾವು ನೈಸರ್ಗಿಕವಾದ ಟೋನರ್ ಗಳನ್ನು ಬಳಸಬಹುದು. ರೋಜ್ ವಾಟರ್ ಕೂಡ ಉತ್ತಮ ಟೋನರ್ ಆಗಿ ಕೆಲಸ ಮಾಡುತ್ತದೆ. ರೋಜ್ ವಾಟರ್ ಅನ್ನು ಹತ್ತಿಯ ಉಂಡೆಯನ್ನು ಎತ್ತಿ ಅದನ್ನು ಮುಖಕ್ಕೆ ಹಚ್ಚಿ ಬಳಸಿಕೊಳ್ಳಬೇಕು.
ಸೀರಂ ಹಚ್ಚಿ :
ಸೇರಂ ಇದು ನಮ್ಮ ಚರ್ಮಕ್ಕೆ ಬೇಕಾಗಿರುವಂತಹ ಹಲವಾರು ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದೆ. ಇದು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ವಿಟಮಿನ್ ಇ ಎಂಬ ಹಸಿರು ಮಾತ್ರೆಗಳನ್ನು ಅಲೋವೆರಾ ಜೆಲ್ ನೊಂದಿಗೆ ಬೆರೆಸಿ ಪ್ರತಿದಿನವೂ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡು ಮಲಗಬೇಕು.
ಮಾಯಿಶ್ಚರೈಸರ್ ನ ಬಳಕೆ :
ಮಾಯಿಶ್ಚರೈಸರ್ ಅನ್ನು ಪದೇ ಪದೇ ಬಳಸುವುದು ಸೂಕ್ತವಲ್ಲ ವಾರಕ್ಕೆ ಒಂದರಿಂದ ಎರಡು ಬಾರಿ ಬಳಸುವುದು ಸೂಕ್ತ ಮೊಸರು ಅಥವಾ ಜೇನುತುಪ್ಪವನ್ನು ಹಚ್ಚಿಕೊಳ್ಳಬಹುದು ಮೊಸರು ಹಾಗೂ ಜೇನುತುಪ್ಪ ಇವೆರಡೂ ನೈಸರ್ಗಿಕ ಅಂಶಗಳಾಗಿದ್ದು ನಮ್ಮ ತ್ವಚೆಯ ಒಳಪನ್ನು ಇನ್ನಷ್ಟು ಉತ್ತಮವನ್ನಾಗಿ ಸ್ವ ಸಹಾಯಕಾರಿಯಾಗಿದೆ.
ಉತ್ತಮವಾದ ಆಹಾರ ಸೇವನೆ:
ನಮ್ಮ ತ್ವಚೆಯು ಒಳಪಾಗಿರಲು ಹಾಗೂ ಕಾಂತಿಯುತವಾಗಿರಲು ಮೇಲೆ ನಿಂದ ಅಷ್ಟೇ ಸೌಂದರ್ಯ ವದಕಗಳನ್ನು ಬಳಸಿದರೆ ಸಾಲದು. ಒಳಗಿನಿಂದಲೂ ಕೂಡ ನಮ್ಮ ತ್ವಚೆಯನ್ನು ಉತ್ತಮವಾಗಿಸಬೇಕು ಹೇಗೆಂದರೆ ಉತ್ತಮವಾದಂತಹ ಆಹಾರವನ್ನು ಸೇವಿಸಬೇಕು ಅದಕ್ಕಾಗಿ ಚೆನ್ನಾಗಿ ನೀರನ್ನು ಕುಡಿಯಬೇಕು ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ದಿನನಿತ್ಯ ಸೇವಿಸಬೇಕು ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ತಿನ್ನೋದು ನಿಷೇಧಿಸಬೇಕು.
ಉತ್ತಮ ನಿದ್ರೆ ಹಾಗೂ ಒತ್ತಡ ರಹಿತ ಜೀವನ :
ಮನುಷ್ಯ ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಾನೋ ಅಷ್ಟೇ ಚೆನ್ನಾಗಿ ಅವನ ಮುಖ ಹೊಳೆಯುತ್ತದೆ ಏಕೆಂದರೆ ಅವನ ತಲೆಯಲ್ಲಿ ಯಾವುದೇ ತರಹದ ಚಿಂತೆಗಳಾಗಲಿ ಕೆಟ್ಟ ಆಲೋಚನೆಗಳಾಗಲಿ ಇರುವುದಿಲ್ಲ ಇದರಿಂದ ನಮ್ಮ ಜೀವನದಲ್ಲಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ