ಮಹಾರಾಷ್ಟ್ರ ಡಿಸಿಎಂ ನಿಧನ

 

ವಿಮಾನ ದುರಂತದಿಂದ ಮಹಾರಾಷ್ಟ್ರ ಡಿಸಎಂ ಅಜಿತ್ ಪವಾರ್ ಸಾವು






ಅಜಿತ್ ಪವಾರ್ ಅವರು 1959 ಜುಲೈ 22 ರಲ್ಲಿ ಅಹಮದ್ನಗರ ಜಿಲ್ಲೆಯ ಡಿಯೋ ಲಾಲಿ ಎಂಬಲ್ಲಿ ಜನಿಸಿದ್ದಾರೆ. ಅಜಿತ್ ಪವಾರ್ ಅವರು ಸುನಿತ್ರ ಪವಾರ್ ಅವರನ್ನು ವಿವಾಹವಾಗಿದ್ದಾರೆ ಇವರಿಬ್ಬರಿಗೆ ಜೆ ಮತ್ತು ಪಾರ್ಥ ಪವಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 

 ಇವರ ಚಿಕ್ಕಪ್ಪನವರಾದಂತಹ ಶರತ್ ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ. ಅಜಿತ್ ಪವಾರ್ ಅವರು ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದು 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾಗಿ. ನಂತರ 1991ರಲ್ಲಿ ಪುಣೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು. 

ಮೊದಲ ಬಾರಿಗೆ 1991ರಲ್ಲಿ ಬಾರಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಅವರು ತಮ್ಮ ಚಿಕ್ಕಪ್ಪನಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟರು ನಂತರ ಪ್ರಧಾನಮಂತ್ರಿ ಆದಂತಹ ಪಿ ವಿ ನರಸಿಂಹರಾವ್ರ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ನಂತರ ಭಾರಮತಿ ವಿಧಾನಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಗೆ 7 ಬಾರಿ ಆಯ್ಕೆಯಾದರು. 

1992 ರಲ್ಲಿ ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1999 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. 2003ರಲ್ಲಿ ಸುಶೀಲ್ ಕುಮಾರ್ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಜವಾಬ್ದಾರಿಯಾಗಿ ನಿರ್ವಹಿಸಿದ್ದಾರೆ 


ಜನ ಸಂಪನ್ಮೂಲ ಸಚಿವರಾಗಿದ್ದಾಗ ಲವಾಸದ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪಗಳಿವೆ. ಸೆಪ್ಟಂಬರ್ 2012ರಲ್ಲಿ 70,000 ಕೋಟಿ ದುರುಪಯೋಗ ನಡೆದಿದೆ ಎಂಬ ಆರೋಪದ ಮೇಲೆ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತೆ ಅಂಜಲಿ ದುಮನಿಯ ಅವರು ಅಜಿತ್ ಪವಾರ್ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲು ಕಾರಣರಾದರು ಆದರೆ ಆರೋಪಗಳು ಸಾಬೀತವಾಗಲಿಲ್ಲ ಮತ್ತು ಅಜಿತ್ ಅವರೇ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಆಗಿ ನೇಮಕವಾದರು.  

2019 ನವೆಂಬರ್ 23ರಂದು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಹೊರಬಂದು ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವನ್ನು ಕೈಜೋಡಿಸಿದರು. ಹೀಗೆ ಅವರ ರಾಜಕೀಯ ಜೀವನವು ಮುಂದುವರೆದು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ ಅಷ್ಟೇ ಅಲ್ಲದೆ 8 ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ. 

ಅಜಿತ್ ಪವಾರ್ ಅವರು ಸಾಯುವವರೆಗೂ ದೇವೇಂದ್ರ ಪಡ್ನಮಿಸ್ ಅವರ ಅಡಿಯಲ್ಲಿ ಏಕನಾಥ್ ಚಿಂದೆ ಜೊತೆಗೆ ಮಹಾರಾಷ್ಟ್ರದ ಎಂಟನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಅವರು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಪೃಥ್ವಿರಾಜ್ ಚೌಹಾನ್ ದೇವೇಂದ್ರ ಫಡ್ನಮಿಸ್ ಏಕನಾಥ್ ಚಿಂತೆ ಹಾಗೂ ಉದ್ದಕ್ರಿಯವರ ಸಚಿವ ಸಂಪುಟಗಳು ಸೇರಿದಂತೆ ವಿವಿಧ ಸರ್ಕಾರಗಳ ಅಡಿಯಲ್ಲಿ ಅವರಿಗೆ ಈ ಸ್ಥಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. 


28 ಜನವರಿ 2026ರಂದು ಬೆಳಿಗ್ಗೆ 9-12 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾರಮತಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ವಿಮಾನವು ರನ್ವೇ 11ರ ಎರಡನೇ ಮಾರ್ಗವನ್ನು ಸಮೀಪಿಸಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೆ ವಿಮಾನವು ರನ್ವಯ ಇಂದ ಹೊರಗೆ ಬಂದು ಬೆಂಕಿ ಹತ್ತಿ ಅದರ ಪರಿಣಾಮವಾಗಿ ಪವರ್ ಮತ್ತು ಅವರ ಜೊತೆಗೆ ಇದ್ದ ನಾಲ್ಕು ಜನರು ಕೂಡ ಸಾವನ್ನಪ್ಪಿದ್ದಾರೆ. 

ಅಪಘಾತವಾದ ವಿಮಾನವು 16 ವರ್ಷ ಹಳೆಯದಾಗಿದ್ದು  VT-SSK  ನೋಂದಣಿ ಹೊಂದಿರುವಂತಹ ಲಿಯರ್ ಜಟ್ 45 XR ಆಗಿದೆ. ಈ ಘಟನೆ ನಡೆದ ಸಮಯದಲ್ಲಿ ಅಜಿತ್ ಪವಾರ್ ಅವರು ಮುಂದೆ ಬರುವಂತಹ ಜಿಲ್ಲಾ ಪರಿಷತ್ತಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಲು ಮಾತನಾಡಲು ಬಾರಮ್ಮತಿಗೆ ಪ್ರಯಾಣಿಸುತ್ತಿದ್ದರು. 










ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions