ಗೌತಮಿ ಜಾದವ್ ಅವರ ದುಬಾರಿ ಕಾರುಗಳು
ಗೌತಮಿ ಜಾದವ್ ಅವರ ದುಬಾರಿ ಕಾರುಗಳು
ಸತ್ಯ ದಾರವಾಹಿಯಲ್ಲಿ ಟಾಮ್ ಬಾಯ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಗೌತಮಿ ಜಾದವ್ ಅವರು ಕನ್ನಡದ ಕಿರುತೆರೆಯಲ್ಲಿ ಮಾತ್ರವಲ್ಲದೆ ಯಲ್ಲೂ ಕೂಡ ಮಿಂಚಿದ್ದಾರೆ. ಗೌತಮಿ ಜಾದವ್ ಅವರು 1993 ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಹ ಮರಾಠಿಯವರಾದರೂ ಕೂಡ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.
ಕನ್ನಡದ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾದಂತಹ ಅಭಿಷೇಕ್ ಕಾಸರಗೋಡ್ ಅವರನ್ನು 2019ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಇವರದು ಲವ್ ಕಮ್ ಅರೇಂಜ್ ಮ್ಯಾರೇಜ್. ಗೌತಮಿಯವರು ಜೀವನವನ್ನು ತುಂಬಾ ಎಂಜಾಯ್ ದಿಂದ ಕಳೆಯಲು ಇಷ್ಟಪಡುತ್ತಾರೆ. ಇವರು ಟಿವಿ ಇಲ್ಲದ ಮನೆಯಿಂದ ಬಂದು ಆರ್ಟಿಸ್ಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಹೋಗಿದ್ದಾರೆ. ಕಾಲೇಜು ಶಿಕ್ಷಣವನ್ನು ಬಿಎನ್ಎಂ ಕಾಲೇಜಿನಲ್ಲಿ ಮುಗಿದ್ದಾರೆ ನಂತರ ಬಿಕಾಂ ಪದವಿಯನ್ನು ಪಡೆದಿದ್ದಾರೆ. ಫ್ಯಾಶನ್ ಡಿಸೈನಿಂಗ್ ನಲ್ಲಿ ಪರಿಣಿತಿ ಪಡೆದಿರುವಾಗ ಗೌತಮಿಯವರು ಪಿಯುಸಿ ಇದ್ದಾಗಲೇ ಆಡಿಶನ್ ನಲ್ಲಿ ಭಾಗವಹಿಸುತ್ತಿದ್ದರು.
ಗೌತಮಿ ಜಾಧವ್ ಅವರು ಉತ್ತಮ ಆರ್ಟಿಸ್ಟ್ ಕೂಡ ಹೌದು ಇವರ ಅತ್ಯುತ್ತಮ ಪೇಂಟಿಂಗ್ ಗಳು ಚಿತ್ರ ಸಂತೆಯಲ್ಲಿ ಪ್ರದರ್ಶನಗೊಂಡಿವ.
ಮೊಟ್ಟ ಮೊದಲ ಬಾರಿಗೆ 2018ರಲ್ಲಿ ಕಿನಾರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ತದನಂತರದಲ್ಲಿ ಆಧ್ಯ ಚಿತ್ರದಲ್ಲೂ ಅಭಿನಯಿಸಿದ್ದಾರೆ ಕನ್ನಡ ಅಷ್ಟೇ ಅಲ್ಲದೆ ಕೆಲವು ತೆಲುಗು ಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ.
2020ರಲ್ಲಿ ಜೀ ಕನ್ನಡದಲ್ಲಿ ಆರಂಭವಾದ ಅಂತಹ ಸತ್ಯಧಾರವಾಹಿ ಮೂಲಕ ಕನ್ನಡದ ಹಿರಿತೆರೆಯಿಂದ ಕಿರುತೆರೆಗೆ ಆಧಾರ್ಪಣೆ ಮಾಡಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಅವರ ಹೆಸರು ಸತ್ಯ ಮತ್ತು ಆ ಪಾತ್ರವೂ ಟಾಮ್ ಬಾಯ್ ಪಾತ್ರವಾಗಿತ್ತು. ಸಂಪೂರ್ಣ ಹುಡುಗನ ವೇಷಭೂಷಣದೊಂದಿಗೆ ಅಭಿನಯಿಸಿದ್ದಾರೆ.
ಹಿರಿತರೆ ಕಿರಿತರೆ ಅಷ್ಟೇ ಅಲ್ಲದೆ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ನ 11ನೇ ಸೀಸನ್ ನಲ್ಲಿ ನಾಲ್ಕನೇ ಪದ್ಯ ಆಗಿ ಭಾಗವಹಿಸಿದ್ದಾರೆ . ಬಿಗ್ ಬಾಸ್ ನಲ್ಲಿ ಭಾಗವಹಿಸಿದ ನಂತರ ಅವರ ಪ್ರಖ್ಯಾತಿ ಎಲ್ಲೆಡೆಯೂ ಮನೆಮಾತಾಯಿತ್ತು.
ಬಿಗ್ ಬಾಸ್ ನಿಂದ ಹೊರಬಂದ ನಂತರ ಗೌತಮಿ ಯವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗೆ ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ ಅದಾದ ನಂತರ ಮತ್ತೆ ಕನ್ನಡದ ಹಿರಿತೆಗೆ ಪಾದಾರ್ಪಣೆ ಮಾಡಿದ್ದಾರೆ ಯಾವ ಚಿತ್ರದ ಮೂಲಕ ಎಂದರೆ ಮಂಗಳಾಪುರಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಈ ಚಿತ್ರದಲ್ಲಿ ಅವರು ಸುಕನ್ಯಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ
ಗೌತಮಿ ಜಾಧವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದು ಇತ್ತೀಚಿಗೆ ಅವರು ಉಗ್ರಂ ಮಂಜು ಅವರ ವಿವಾಹಕ್ಕೆ ತೆರಳಿ ಶುಭಾಶಯಗಳು ಕೋರಿದ್ದಾರೆ
ಗೌತಮಿ ಜಾದವ್ ಅವರು ಒಟ್ಟಿಗೆ ಎರಡೆರಡು ಕಾರುಗಳನ್ನು ಖರೀದಿಸಿದ್ದಾರೆ ಒಂದು ಕುಟುಂಬಕ್ಕೆ ಹಾಗೂ ಇನ್ನೊಂದು ಖಾಸಗಿ ಬಳಕೆಗೆ ಎಂದು ಹೇಳಲಾಗಿದೆ. ಅವರು ಖರೀದಿಸಿದ ಎರಡು ಕಾರುಗಳು ಟಾಟಾ ಸಫಾರಿ ಎಂದು ಹೇಳಲಾಗಿದೆ.
ಗೌತಮಿ ಜಾಧವ್ ಅವರ ಕುಟುಂಬಕ್ಕೆ ಎಲ್ಲರೂ ಶುಭಾಶಯಗಳು ಕೋರಿದ್ದಾರೆ ಹಾಗೂ ಹೊಸ ಕಾರಿನಲ್ಲಿ ಅವರ ಪ್ರಯಾಣವು ಶುಭಕರವಾಗಿರಲಿ ಎಂದು ಹಾರೈಸಿದ್ದಾರೆ.
ಟಾಟಾ ಸಫಾರಿ ಕಾರಿನ ಬೆಲೆಯು 18 ಲಕ್ಷದಿಂದ ಆರಂಭವಾಗಿ 30 ಲಕ್ಷದವರೆಗೂ ಇದೆ ಎಂದು ಅಂದಾಜಿಸಲಾಗಿದೆ ಈ ಕಾರು 4 ಸಿಲಿಂಡರಿನ ಇಂಜಿನ್ ಅನ್ನು ಹೊಂದಿದ್ದು 1956 ಸಿಸಿ ಇಂಜಿನ್ ಅನ್ನು ಹೊಂದಿದೆ.
%20(9).jpeg)
%20(13).jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ