ಕಾವ್ಯ ಗೌಡ ಮನೆಯಲ್ಲಿ ಕಲಹ
ಕಿರುತೆರೆ ನಟಿ ಕಾವ್ಯ ಗೌಡ ಕೌಟುಂಬಿಕ ಕಲಹ
ಎಲ್ಲರ ಮನೆ ದೋಸೆನು ತೂತು ಎನ್ನುವ ಹಾಗೆ ಇದು ನಟಿಯರಿಗೂ ಕೂಡ ಹೊರತೇನಲ್ಲ.
ಧಾರಾವಾಹಿಯಲ್ಲಿ ನಟಿಸುವ ನಟಿಯರ ಪಾತ್ರವು ನಟನೆಗೆ ಮಾತ್ರ ಸೀಮಿತವಾಗಿರುತ್ತದೆ. ನಿಜ ಜೀವನದಲ್ಲಿ ಅವರ ಜೀವನ ಶೈಲಿ ಬೇರೆ ಇರುತ್ತದೆ. ಮನೆ ಅಂದಮೇಲೆ ಜಗಳ ಕಲಹ ಎಲ್ಲವೂ ಸಹಜವೇ. ಎಲ್ಲರ ಮನೆಯಲ್ಲಿ ಇರುವಂತಹ ವಾರಗಿತ್ತಿಯರ ಜಗಳ ಈಗ ಬೀದಿಗೆ ಬಂದಿದೆ.
ಕಾವ್ಯ ಗೌಡ ಇವರು ಕಿರುತೆರಯಲ್ಲಿ
ರಾಧಾ ರಮಣ ಹಾಗೂ ಗಾಂಧಾರಿ ಎಂಬ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಅವರ ಕೈ ಹಿಡಿದಿದ್ದಾರೆ ಅವರಿಬ್ಬರಿಗೂ ಒಬ್ಬಳು ಮುದ್ದಾದ ಮಗಳಿದ್ದಾಳೆ ಅವಳನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬಳು ಕೆಲಸದಾಳನ್ನು ಇಟ್ಟಿದ್ದಾರೆ.
ಟಿವಿ9 ಜೊತೆ ನೇರ ಸಂದರ್ಶನದಲ್ಲಿ ಮಾತನಾಡಿದ ಕಾವ್ಯ ಗೌಡ ಅವರು ಜಗಳ ಅಂದಮೇಲೆ ಎಲ್ಲರ ಮನೆಯಲ್ಲಿ ಇರುವುದು ಸಹಜ ಅದನ್ನು ಮೀಡಿಯಾ ಮುಂಚೆ ತರಲು ನನಗೆ ಇಷ್ಟವಿಲ್ಲವೆಂದು ಹೇಳಿದ್ದಾರೆ. ಆದರೆ ಈಗ ಮಾತನಾಡುವುದು ಅನಿವಾರ್ಯವಾಗಿದೆ ಮಾತನಾಡದೆ ಇದ್ದರೆ ನನ್ನದೇ ತಪ್ಪಾಗುತ್ತದೆ ಎಂದು ತಿಳಿದು ಎಲ್ಲವನ್ನು ವಿವರವಾಗಿ ಹೇಳಿದ್ದಾರೆ
ಕಾವ್ಯ ಗೌಡ ಅವರ ಮನೆಯಲ್ಲಿ ಅವರ ಅತ್ತೆ ಮಾವ ಮೈದುನ ನಂದೀಶ್ ಹಾಗೂ ಅವರ ಪತ್ನಿ ಪ್ರೇಮ ಎಲ್ಲರ ಕುಟುಂಬವು ಇದೆ. ಕಾವ್ಯ ಗೌಡ ಅವರ ಮಾವ ರೇವಣ್ಣ ಎಂಬುವವರು ಬೆಂಗಳೂರಿನಲ್ಲಿ ನೂರು ಕೋಟಿ ಮನೆಯನ್ನು ಕಟ್ಟಿದ್ದಾರೆ. ಈ ಮನೆಯನ್ನು ತನ್ನದಾಗಿಸಿಕೊಳ್ಳಬೇಕೆಂದು ಕಾವ್ಯ ಗೌಡ ಅವರು ವಾರಗಿತ್ತಿಯ ಜೊತೆ ಜೊತೆ ಜಗಳವಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆ ಒಂದೇ ಆದರೂ ಕಾವ್ಯ ಗೌಡ ಅವರ ಪತಿ ತೋಮಶೇಖರ್ ಹಾಗೂ ಅವರ ಮಗಳು ಇರುವುದು ಬೇರೆ ಕಡೆ. ಅದೇ ಮನೆಯಲ್ಲಿ ಅವರ ಮಾವ ಅತ್ತೆ ಹಾಗೂ ಮೈದುನ ಮತ್ತು ಮೈದುನನ ಹೆಂಡತಿ ಪ್ರೇಮ ಇರುವುದು ಬೇರೆ. ಕಾವೇಗೌಡ ಅವರ ಮಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗಿಯ ಮೇಲೆ ನಂದೀಶ್ ಅವರ ಪತ್ನಿ ಪ್ರೇಮ ಅವರು ಕಳ್ಳತನದ ಆರೋಪವನ್ನು ಹೊರಿಸಿದ್ದಾರೆ. ಈ ಕಳ್ಳತನದ ಆರೋಪವನ್ನು ಹೊರಿಸಿದ್ದಕ್ಕಾಗಿ ಕಾವ್ಯ ಗೌಡ ಅವರು ಒಂದು ದಿನ ಪ್ರೇಮಾ ಅವರ ರೂಮಿಗೆ ಹೋಗಿ ಅವರೆಲ್ಲರೂ ಊಟ ಮಾಡುತ್ತಿದ್ದಾಗ ಅವರ ತಟ್ಟೆಯನ್ನು ಬಿಸಾಡಿ ಅವರ ಜೊತೆ ಜಗಳವಾಡಿದ್ದಾರೆ.
ಕಾವ್ಯ ಗೌಡ ಹಾಗೂ ಸೋಮಶೇಖರ್ ಎಂಬುವರು ಪ್ರೀತಿಸಿ ಮದುವೆಯಾಗಿದ್ದು ಅವರು ಬೇರೆ ಜೀವನವನ್ನು ನಡೆಸುತ್ತಿದ್ದಾರೆ. ನಂದೀಶ್ ಅವರ ಪತ್ನಿಯಾದಂತಹ ಪ್ರೇಮ ಅವರು ಸಂಬಂಧಿಕರಲ್ಲಿ ಇರುವ ಹುಡುಗಿಯಾಗಿದ್ದು ಎಷ್ಟೇ ಜಗಳ ಬಂದರೂ ಕೂಡ ಅವರ ಮಾವನವರ ಗಮನಕ್ಕೆ ತರುತ್ತಿದ್ದರಂತೆ. ಪ್ರತಿಸಲ ಮಾವನವರ ಗಮನಕ್ಕೆ ತಂದಾಗಲು ಅವರ ಮಾವನವರು ಹೇಳುತ್ತಿದ್ದುದೇನೆಂದರೆ, ತಾಳ್ಮೆ ತಾಳ್ಮೆ ಸಹಿಸಿಕೊಳ್ಳು ಎಂದು ಹೇಳುತ್ತಿದ್ದರಂತೆ. ಪ್ರತಿ ಸಲ ಸಹಿಸಿಕೊಂಡಾಗಲೂ ತಪ್ಪು ನಂದೇ ಎಂದು ಕಾವ್ಯ ಗೌಡ ನನ್ನ ಮೇಲೆ ಜಗಳ ಆಡುತ್ತಿದ್ದಳು. ಈ ಬಾರಿ ನನ್ನ ತಪ್ಪಿಲ್ಲದಿದ್ದರೂ ಕೂಡ ಅವಳು ನನ್ನನ್ನು ನನ್ನ ಗಂಡನ ಮೇಲೆ ಆರೋಪ ಮಾಡಿದ್ದಾಳೆ ಹೀಗಾಗಿ ನಾವು ಮೀಡಿಯಾ ಮುಂದೆ ಮಾತನಾಡಲೇಬೇಕಾದ ಅವಶ್ಯಕತೆ ಇದೆ ಎಂದಿದ್ದಾಳೆ.
ಪ್ರೇಮ ಅವರ ತಂದೆ ಕಾವ್ಯ ಗೌಡ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೇಮ ಅವರು ಹೇಳುವುದೇನೆಂದರೆ ಕಾವ್ಯ ಗೌಡ ಅವರಿಗೆ ಮನೆಯನ್ನು ಸಂಪೂರ್ಣ ತಣ್ಣದಾಗಿಸಿಕೊಳ್ಳಬೇಕೆಂಬ ಆಸೆ ಇದೆ ಅಷ್ಟೇ ಅಲ್ಲದೆ ನಮ್ಮನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಯೋಚನೆ ಮಾಡಿದ್ದಾರೆ. ನಮ್ಮನ್ನು ಮನೆಯಿಂದ ಹೊರಗೆ ಹಾಕಲು ಇದು ಕಾವ್ಯ ಗೌಡ ಮನೆಯಲ್ಲ ಇದು ನಮ್ಮ ಮಾವನವರು ಕಟ್ಟಿಸಿದ ಮನೆ. ಕಾವ್ಯ ಗೌಡ ಎಷ್ಟು ಅಧಿಕಾರವಿದೆಯೂ ನನಗೂ ಕೂಡ ಈ ಮನೆಯಲ್ಲಿ ಅಷ್ಟೇ ಅಧಿಕಾರವಿದೆ ಎಂದು ನಂದೀಶ್ ಪತ್ನಿ ಪ್ರೇಮ ಹೇಳುತ್ತಾರೆ. ಅತ್ತೆ ಮಾವ ಎಲ್ಲರನ್ನು ನಾನೇ ನೋಡಿಕೊಳ್ಳುತ್ತೇನೆ ಕಾವ್ಯ ಗೌಡ ಅದೇ ಮನೆಯಲ್ಲಿದ್ದರೂ ಬೇರೆ ಕಡೆ ಅಡುಗೆ ಮಾಡಿಕೊಳ್ಳುತ್ತಾರೆ. ನಾನು ಅತ್ತೆ ಒಂದೇ ಕಡೆ ಅಡುಗೆ ಮಾಡುತ್ತೇವೆ ಕಾವ್ಯ ಗೌಡ ಮಾತ್ರ ಸಪರೇಟ್ ಅಡುಗೆ ಮಾಡುತ್ತಾರೆ ಅವರಿಗೆ ಸಪರೇಟ್ ಕಿಚ್ಚನ್ ಇದೆ ಎಂದು ಅವರ ಬಗ್ಗೆ ಪ್ರತ್ಯಾರೂಪ ಮಾಡಿದ್ದಾರೆ.
ಕಾವ್ಯ ಗೌಡ ಅವರ ಮೈದುನ ಪತ್ನಿಯಾದ ಪ್ರೇಮಾ ಅವರು ಆರೋಪಿಸುವುದೇನೆಂದರೆ, ಸೋಮಶೇಖರ್ ಅವರು ನಮ್ಮ ಮುಂದೆ ಅಶ್ಲೀಲವಾಗಿ ಪ್ಯಾಂಟನ್ನು ಬಿಚ್ಚುತ್ತಾರೆ ಎಂದು ಅಷ್ಟೇ ಅಲ್ಲದೆ ನನ್ನ ತಂಗಿಯ ಮೇಲೆ ಹಲ್ಲೆ ಮಾಡಲು ಕೂಡ ಒಂದು ಸಲ ಸೋಮಶೇಖರ್ ಅವರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಕಡೆ ಕಾವ್ಯ ಗೌಡ ಹೇಳುತ್ತಾರೆ ಪ್ರೇಮಾ ಅವರ ತಂದೆ ನನ್ನ ಮೇಲೆ ರೇಪ್ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಇನ್ನೊಂದೆಡೆ ಪ್ರೇಮ ಹೇಳೋರು ಹೇಳುತ್ತಾರೆ ಸೋಮಶೇಖರ್ ಅವರು ನನ್ನ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲರ ಮನೆಯಲ್ಲಿಯೂ ವಾರಗಿತ್ತಿರ ಜಗಳ ಇರುವುದು ಸಹಜ ಆದರೆ ಇವರ ಮನೆಯಲ್ಲಿ ಅದು ದೊಡ್ಡದಾಗಿದೆ ನೀರಿಗೆ ಬಂದಿದೆ.
%20(13).jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ