ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ

 

ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ 

ಖಾದಿ ಹಿನ್ನೆಲೆ

ಖಾದಿ ಬಟ್ಟೆಗಳನ್ನು ಮಹಾತ್ಮ ಗಾಂಧೀಜಿಯವರು 1920ರ ಸ್ವದೇಶಿ ಚಳುವಳಿಯ ಸಮಯದಲ್ಲಿ ಜನಪ್ರಿಯಗೊಳಿಸಿದರು. ಇದು ಭಾರತೀಯರನ್ನು ಸ್ವಾವಲಂಬಿಗಳನ್ನಾಗಿಸಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಬಳಸಲಾಯಿತು. ಇದರ ಮುಖ್ಯ ಸಾಧನ ವೆಂದರೆ ಚರಕ. ವಿದೇಶದಲ್ಲಿ ಭಾರತೀಯರ ಉತ್ಪನ್ನಗಳಿಗೆ ಬೆಲೆ ಸಿಗುವ ಸಲುವಾಗಿ ಹಾಗೂ ಉತ್ತಮ ಮಾರುಕಟ್ಟೆಯ ಅವಕಾಶಕ್ಕಾಗಿ ಖಾದಿಯನ್ನು ಪ್ರಾರಂಭಿಸಲಾಯಿತು. 

ಖಾದಿ ಬಟ್ಟೆಗಳನ್ನು ಕೈಯಿಂದ ನೀಯಲಾಗುತ್ತದೆ. ಇದು ಭಾರತದಲ್ಲಿರುವಂತಹ ಪ್ರಾಚೀನ ಕಾಲದ ಕೈಮಗ್ಗದ ಪರಂಪರೆಯಾಗಿದೆ ಬ್ರಿಟಿಷರ ಬಟ್ಟೆಗಳಿಗೆ ಪರ್ಯಾಯವಾಗಿ ಖಾದಿಯನ್ನು ಪುನರುಜ್ಜೀವನಗೊಳಿಸಲಾಯಿತು. ಚರಕ ದಿಂದ ನೀಡಿದ ಖಾದಿ ಬಟ್ಟೆಗಳನ್ನು ಧರಿಸುವುದು ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಧ್ಯೇಯವಾಗಿತ್ತು ಇದರಿಂದ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಲು ಪ್ರಾರಂಭಿಸಲಾಯಿತು. 

ಕರ್ನಾಟಕದಲ್ಲಿ 1957ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಪ್ರಾರಂಭಿಸಲಾಯಿತು. ಈ ಖಾದಿ ಗ್ರಾಮೋದ್ಯೋಗ ಸಂಘವು ರಾಷ್ಟ್ರಧ್ವಜವನ್ನು ತಯಾರಿಸುತ್ತದೆ ಪ್ರಸ್ತುತವಾಗಿ ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗದಲ್ಲಿ ತಯಾರಿಸಲಾಗುತ್ತದೆ. 

ಖಾದಿ ಉತ್ಪಾದನೆಯು 2015 ರಿಂದ 19ರ ನಡುವೆ ಉತ್ತಮ ರೀತಿಯಲ್ಲಿ ಏರಿಕೆಯಾಗಿದೆ ಸರ್ಕಾರವು ಖಾದಿ ಬಟ್ಟೆಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತಿದೆ. 

ರಾಜ್ಯ ಸರ್ಕಾರಿ ನೌಕರರಿಗೆ ಕಡ್ಡಾಯ 

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರು ಕೂಡ ಖಾದಿಯನ್ನು ಕಡ್ಡಾಯವಾಗಿ ಧರಿಸಬೇಕು ಎಂಬುದರ ಬಗ್ಗೆ ಜನವರಿ 29ರಂದು ಮಧ್ಯಾಹ್ನ 12 ಗಂಟೆಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಲಾಗಿದೆ. 

ಚರ್ಚೆಯ ವಿಷಯಗಳು

ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಖಾದಿಯನ್ನು ಎಲ್ಲರೂ ಕಡ್ಡಾಯವಾಗಿ ಧರಿಸಬೇಕು. 
ವಿಶೇಷ ದಿನಗಳಾದಂತಹ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಕಡ್ಡಾಯವಾಗಿ ಧರಿಸಬೇಕು. 

ಸರ್ಕಾರಿ ನೌಕರರಿಗೂ ಕೂಡ ಶೀಘ್ರದಲ್ಲೇ ಶೀಘ್ರದಲ್ಲಿ ಹೊಸ ಹೊಸ ಡ್ರೆಸ್ ಕೋಡ್ ಜಾರಿಯಾಗಲಿದೆ ಇದು ಸ್ಥಳೀಯ ನೇಕಾರರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರ ಉದ್ಯೋಗವನ್ನು ಪ್ರೋತ್ಸಾಹಿಸುತ್ತದೆ. ಈ ಕುರಿತು ಜನವರಿ 29 ಗುರುವಾರದಂದು ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ 

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಜೊತೆ ಮುಖ್ಯ ಕಾರ್ಯದರ್ಶಿಗಳು ಇಂದು ವಿಧಾನಸಭೆಯಲ್ಲಿ ಚರ್ಚೆಯನ್ನು ನಡೆಸಲಿದ್ದಾರೆ ಈ ನಿಯಮಗಳನ್ನು ಜಾರಿಗೊಳಿಸುವುದರಿಂದ ಆಗುವ ಉಪಯೋಗಗಳ ಕುರಿತು ಚರ್ಚಿಸಲಿದ್ದಾರೆ ಬಹುತೇಕವಾಗಿ ಒಪ್ಪಿಗೆ ಸಿಗುವುದರ ಬಗ್ಗೆ ಕಾದು ನೋಡಬೇಕಾಗಿದೆ ಒಂದು ವೇಳೆ ಒಪ್ಪಿಗೆ ಸಿಕ್ಕರೆ ಮುಂದಿನ ತಿಂಗಳಿನಿಂದಲೇ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ತಿಂಗಳಿಗೊಮ್ಮೆ ಖಾದಿ ಧರಿಸುವುದು ಕಡ್ಡಾಯವಾಗಲಿದೆ


ಕಾಮೆಂಟ್‌ಗಳು

Vachanamritablogspot

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

Terms and conditions