ಗೂಗಲ್ ಇಂದ ಹಣ ಗಳಿಸುವ ಅವಕಾಶ
ಗೂಗಲ್ ನಿಂದ ಹಣ ಗಳಿಸುವ ಸರಳ ಉಪಾಯ
ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮದೇ ಆದಂತಹ ಕನಸುಗಳು ಇರುತ್ತವೆ ಆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಹಣದ ಅವಶ್ಯಕತೆ ಇದೆ ಆದರೆ ಇತ್ತೀಚಿಗೆ ಹೆಚ್ಚುತ್ತಿರುವ ಬೆಲೆಗಳು ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಕೇವಲ ಒಂದೇ ಆದಾಯದಿಂದ ನಾವು ನಮ್ಮ ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ ಇದಕ್ಕಾಗಿ ಪರ್ಯಾಯ ಆದಾಯದ ಮೂಲಗಳನ್ನು ಬಳಸಿಕೊಳ್ಳಬೇಕು ಈ ಪರ್ಯಾಯದ ಮೂಲದಲ್ಲಿ ಗೂಗಲ್ನಿಂದ ಹಣ ಗಳಿಸುವುದು ಕೂಡ ಒಂದು ಸರಳ ಉಪಾಯವಾಗಿದೆ.
ಗೂಗಲ್ ಎಂಬುದು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಯಾಗಿದೆ. ಮನೆಯಲ್ಲೇ ಕುಳಿತುಕೊಂಡು ಯಾವುದೇ ಒತ್ತಡವಿಲ್ಲದೆ ಇದರಿಂದ ಹಣ ಗಳಿಸಬಹುದು. ಇದಕ್ಕೆ ವಿದ್ಯಾರ್ಥಿಯಾದರೂ ಪರವಾಗಿಲ್ಲ ಗ್ರಹಿಣಿಯಾದರೂ ಪರವಾಗಿಲ್ಲ ಉದ್ಯೋಗ ಮಾಡುತ್ತಿರುವವರೇ ಆಗಿರಲಿ ದಿನಕ್ಕೆ ಕೇವಲ ಎರಡರಿಂದ ಮೂರು ಗಂಟೆ ಕಾಲಾವಕಾಶ ನೀಡಿದರೆ ಸಾಕ
ಗೂಗಲ್ ವೆಬ್ ಸ್ಟೋರೀಸ್
ಸ್ಮಾರ್ಟ್ ಫೋನ್ ಎಲ್ಲರ ಹತ್ತಿರವೂ ಕಡ್ಡಾಯವಾಗಿ ಇದ್ದೇ ಇರುತ್ತದೆ ಅಂದಮೇಲೆ instagram facebook ನ ಸ್ಟೋರಿಗಳ ಬಗ್ಗೆ ಎಲ್ಲರಿಗೂ ಮಾಹಿತಿ ಲಭ್ಯವಾಗಿರುತ್ತದೆ. ಅದೇ ಮಾದರಿಯನ್ನು ಬಳಸಿಕೊಂಡು ಈಗ ಗೂಗಲ್ ನಲ್ಲಿ ಸ್ಟೋರಿಗಳನ್ನು ಕಳುಹಿಸಬೇಕು. ಅದಕ್ಕಾಗಿ ನಮ್ಮದೇ ಆದಂತಹ ಒಂದು ಖಾತೆಯನ್ನು ತೆರೆಯಬೇಕು ಅದರಲ್ಲಿ ಆಸಕ್ತಿದಾಯಕ ವಾದಂತಹ ಕಥೆಗಳನ್ನು ರಚಿಸುವ ಮೂಲಕ ದಿನಕ್ಕೆ ಸಾವಿರಾರು ರೂಪಾಯಿಯನ್ನು ಗಳಿಸಬಹುದು.
ಲಾಗ್ ಅಥವಾ ಕಥೆಗಳನ್ನು ಸುಂದರವಾಗಿ ರಚಿಸಿ ಅವುಗಳನ್ನು ವೆಬ್ಸೈಟ್ನಲ್ಲಿ ಬಿತ್ತರಿಸಬೇಕು ನಂತರ ಆ ವೆಬ್ಸೈಟ್ ಅನ್ನು ಸೂಕ್ತವಾದ ಪ್ಲಗ್ ಇನ್ ಸಹಾಯದಿಂದ ಜೋಡಿಸಬೇಕು. ನಂತರ ವೆಬ್ಸೈಟ್ನಲ್ಲಿ ನಾವು ಪ್ರಕಟಿಸಿದಂತಹ ಸ್ಟೋರಿಗಳನ್ನು ಹೆಚ್ಚು ಜನರು ನೋಡಿದಾಗ ಅದರ ಮೇಲೆ ಅಡ್ವರ್ಟೈಸ್ಮೆಂಟ್ ಗಳು ಬರಲು ಪ್ರಾರಂಭವಾಗುತ್ತದೆ ಎಷ್ಟು ಹೆಚ್ಚು ಜಾಹಿರಾತುಗಳು ಬರುತ್ತವೆಯೋ ಅಷ್ಟು ಹೆಚ್ಚು ಆದಾಯ ನಮ್ಮದಾಗುತ್ತದೆ.
ಗೂಗಲ್ ನ್ಯೂಸ್ ಪೋರ್ಟಲ್
ನಮ್ಮ ಸುತ್ತಮುತ್ತ ಏನು ನಡೆಯುತ್ತದೆ ಎಂಬುದನ್ನು ಜನರಿಗೆ ತಿಳಿಸುವ ಹಂಬಲವಿದ್ದಲ್ಲಿ ಅದನ್ನು ಚೆನ್ನಾಗಿ ಬರವಣಿಗೆ ರೂಪದಲ್ಲಿ ಬರೆದು ಗೂಗಲ್ ನಲ್ಲಿ ಅಪ್ಲೋಡ್ ಮಾಡಬೇಕು ಅದು ಗೂಗಲ್ ನ್ಯೂಸ್ ವಿಭಾಗದಲ್ಲಿ ಪ್ರಕಟಗೊಳ್ಳುತ್ತದೆ ನಮ್ಮ ಸುದ್ದಿಗೆ ಬರುವ ಓದುಗರ ಸಂಖ್ಯೆ ಮತ್ತು ಅದರಲ್ಲಿ ಮೂಡುವಂತಹ ಜಾಹೀರಾತುಗಳ ಆಧಾರದ ಮೇಲೆ ನಮಗೆ ದಿನಕ್ಕೆ ಸಾವಿರಾರು ರೂಪಾಯಿಯನ್ನು ಗಳಿಸಲು ಅವಕಾಶವಿದೆ.
ಗೂಗಲ್ ಒಪಿನಿಯನ್ ರಿವಾರ್ಡ್
ಗೂಗಲ್ ಒಪಿನಿಯನ್ ರಿವರ ಎನ್ನುವುದು ಒಂದು ಆಪ್ ಆಗಿದ್ದು ಅದನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಇದರ ಮೂಲಕ ನಾವು ಸಣ್ಣ ಮೊತ್ತವನ್ನು ಗಳಿಸಬಹುದು. ಈ ಯಾಪ್ ನಲ್ಲಿ ವಿಭಿನ್ನ ಕಂಪನಿಗಳು ತಮ್ಮದೇ ಆದಂತಹ ಉತ್ಪನ್ನಗಳ ಬಗ್ಗೆ ಸರ್ವೆಗಳನ್ನು ನಡೆಸಲಾಗುತ್ತದೆ ನಾವು ಆ ಸರ್ವೆ ಫಾರ್ಮನ್ನು ಭರ್ತಿ ಮಾಡಬೇಕು ಇದರಿಂದ ಸುಮಾರು ಮೂರರಿಂದ ನಾಲ್ಕು ಡಾಲರ್ ನಷ್ಟು ಹಣವನ್ನು ಸಂಪಾದಿಸಬಹುದು ಇದು ಕೇವಲ ಒಂದು ದಿನದ ಗಳಿಕೆಯಾಗಿದ್ದು ವಿದ್ಯಾರ್ಥಿಗಳ ಪಾಕೆಟ್ ಮನೆಗೆ ತುಂಬಾ ಉಪಯುಕ್ತವಾಗಿದೆ.
ಗೂಗಲ್ ಮ್ಯಾಪ್ಸ್
ಗೂಗಲ್ ಮ್ಯಾಪ್ಸ್ ಎನ್ನುವುದು ಕೇವಲ ಗೊತ್ತಿಲ್ಲದ ಜಾಗಕ್ಕೆ ಹೋದಾಗ ಹುಡುಕುವ ದಾರಿಯಲ್ಲ ಇದರಲ್ಲಿ ಉದ್ಯೋಗ ಮಾಡಲು ಕೂಡ ಅವಕಾಶವಿದೆ ನಮ್ಮ ಊರಿನಲ್ಲಿರುವಂತಹ ಯಾವುದೇ ಶಾಲೆಯಾಗಲಿ ಅಂಗಡಿಯಾಗಲೀ ಹೋಟೆಲ್ ಆಗ ನಾವು ಅವುಗಳನ್ನು ಗೂಗಲ್ ಮ್ಯಾಪ್ ನಲ್ಲಿ ಜೋಡಿಸಬಹುದು.
ಕೆಲವು ವ್ಯಾಪಾರಿಗಳಿಗೆ ಆನ್ಲೈನ್ ಲಿಸ್ಟಿಂಗ್ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ ನಾವು ಅವರಿಗೆ ಲಿಸ್ಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಬಹುದು. ಒಂದು ಉದ್ಯೋಗವನ್ನು ಆನ್ಲೈನ್ ಮೂಲಕ ಹೇಗೆ ವಿಸ್ತರಿಸಬಹುದು ಎಂಬದರ ಬಗ್ಗೆ ಮಾಹಿತಿ ನೀಡಬಹುದು ಇದಕ್ಕೆ ಇಂತಿಷ್ಟು ಎಂದು ಸರ್ವಿಸ್ ಚಾರ್ಜ್ ಕೂಡ ಇರುತ್ತದೆ ಸುಮಾರು ಎರಡು ಸಾವಿರ ರೂಪಾಯಿ ಚಾರ್ಜ್ ಮಾಡಬಹುದು .
ಸೂಚನೆ: ಈ ಮೇಲ್ಕಂಡ ಬರವಣಿಗೆಯು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಇದ್ದು ಯಾವುದೇ ಆನ್ಲೈನ್ ಕೆಲಸವನ್ನು ಅಥವಾ ಹಣ ಹೂಡಿಕೆಯ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ಆಯಾ ಫ್ಲಾಟ್ ಫಾರ್ಮ್ಗಳ ನಿಯಮಗಳು ಮತ್ತು ಶರತ್ತುಗಳನ್ನು ದಯವಿಟ್ಟು ಪರಿಶೀಲಿಸಬೇಕು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ